AI ಪ್ಲೇಪಟ್ಟಿ ಜನರೇಟರ್
AI ಪ್ಲೇಪಟ್ಟಿ ಜನರೇಟರ್ ಬಳಸಿ ಪ್ಲೇಪಟ್ಟಿ ರಚಿಸುವುದು ಹೇಗೆ?
ನಿಮಗಾಗಿಯೇ ಸಿದ್ಧಪಡಿಸಿದ ಪ್ಲೇಪಟ್ಟಿಯನ್ನು ಕಂಡುಕೊಳ್ಳಲು ಸಿದ್ಧರಿದ್ದೀರಾ? ಪ್ಲೇಪಟ್ಟಿಗಳು ಟ್ಯಾಬ್ ತೆರೆದು AI ಪ್ಲೇಪಟ್ಟಿ ಬಟನ್ ಆಯ್ಕೆಮಾಡಿ, ಅಷ್ಟೇ. ನಿಮಗೆ ಏನು ಬೇಕು ಎಂದು ವಿವರಿಸಿ - ಪ್ರಕಾರ, ಮೂಡ್, ವಾದ್ಯಗಳು ಅಥವಾ ಬೇರೆ ಯಾವುದೇ ನಿರ್ದಿಷ್ಟ ವಿವರಗಳು - ನಂತರ AI ತನ್ನ ಜಾದೂ ತೋರಿಸುತ್ತದೆ. ನಿಮ್ಮ ಪ್ಲೇಪಟ್ಟಿ ಸಿದ್ಧವಾದ ನಂತರ ನಿಮಗೆ ಅಧಿಸೂಚನೆ ಬರುತ್ತದೆ, ಮತ್ತು ನೀವು ಕೇಳಿ ಆನಂದಿಸಲು ಅದು ಪ್ಲೇಪಟ್ಟಿಗಳು ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಪ್ರಾಂಪ್ಟ್‌ಗಳ ಉದಾಹರಣೆಗಳು
“ನನ್ನ ಮನಸ್ಸು ಹಗುರಾಗಿಸಲು, ಕನಸಿನಂತಹ ಗಾಯನ ಮತ್ತು ಮಿನಿಮಲ್ ಎಲೆಕ್ಟ್ರಾನಿಕ್ ಬೀಟ್‌ಗಳಿರುವ ನಿರಾಳವಾದ ಇಂಡೀ ಪ್ಲೇಪಟ್ಟಿ.”
“ಉತ್ಸಾಹಭರಿತ ಕಂಟ್ರಿ ಹಿಟ್‌ಗಳು ಮತ್ತು ಹಳೆಯ ನೆನಪುಗಳನ್ನು ಕೆದಕುವ ಸಾಫ್ಟ್ ರಾಕ್ ಇರುವ ರೋಡ್ ಟ್ರಿಪ್ ಮಿಕ್ಸ್ ನನಗೆ ಬೇಕು.”
“ತಡರಾತ್ರಿಯ ಓದಿಗಾಗಿ ಆಂಬಿಯೆಂಟ್ ಮತ್ತು ನಿಯೋ-ಸೋಲ್ ಟ್ರ್ಯಾಕ್‌ಗಳ ಹಿತವಾದ ಮಿಶ್ರಣ.”
ನಿಮ್ಮ ಫೀಲ್‌ಗೆ ಹೊಂದುವ ಹಾಡುಗಳ ಪರಿಪೂರ್ಣ ಮಿಕ್ಸ್ ಪಡೆಯಲು ಬೇರೆ ಬೇರೆ ಪ್ರಾಂಪ್ಟ್‌ಗಳೊಂದಿಗೆ ಪ್ರಯೋಗ ಮಾಡಿ. ನಿಮಗೆ ಭರಪೂರ ಶಕ್ತಿಯ ಟ್ರ್ಯಾಕ್‌ಗಳು ಬೇಕಿರಲಿ ಅಥವಾ ನಿರಾಳವಾದ ಚಿಲ್‌ಔಟ್ ಹಾಡುಗಳು ಬೇಕಿರಲಿ, AI ಪ್ಲೇಪಟ್ಟಿ ಜನರೇಟರ್ ನಿಮಗೆ ತಕ್ಕಂತೆ ಸಿದ್ಧಪಡಿಸಿದ ಆಯ್ಕೆಯನ್ನು ನಿಮ್ಮ ಬೆರಳ ತುದಿಯಲ್ಲೇ ನೀಡುತ್ತದೆ. ಸಂಗೀತವನ್ನು ಆನಂದಿಸಿ!