ಆಡಿಯೊ ಪ್ಲೇಬ್ಯಾಕ್
ಟ್ರ್ಯಾಕ್ನ ವಿಸ್ತೃತ ಮೋಡ್ ಎಂದರೇನು?
ನೀವು ಪ್ಲೇ ಮಾಡುತ್ತಿರುವ ಟ್ರ್ಯಾಕ್ ಕುರಿತು ಇನ್ನಷ್ಟು ತಿಳಿಯಲು, ಅದರ ಮೇಲೆ ಟ್ಯಾಪ್ ಮಾಡಿ.
ಹೆಚ್ಚುವರಿ ವೈಶಿಷ್ಟ್ಯಗಳ ಸವಿಗಾಗಿ, ನಿಮ್ಮ ಪರದೆಯ ಕೆಳಭಾಗದಲ್ಲಿ ಈಗ ಪ್ಲೇ ಆಗುತ್ತಿರುವ ಟ್ರ್ಯಾಕ್ ಮೇಲೆ ಟ್ಯಾಪ್ ಮಾಡಿ.
ಇದರಿಂದ ವಿಸ್ತೃತ ಮೋಡ್ ತೆರೆದುಕೊಳ್ಳುತ್ತದೆ, ಅಲ್ಲಿ ನಿಮ್ಮ ಸಂಗೀತ ಅನುಭವವನ್ನು ನಿಮಗೆ ಬೇಕಾದಂತೆ ಹೊಂದಿಸಿಕೊಳ್ಳಲು ಹೆಚ್ಚುವರಿ ಸೆಟ್ಟಿಂಗ್ಗಳು ಮತ್ತು ನಿಯಂತ್ರಣಗಳು ಸಿಗುತ್ತವೆ. ಇದು ನಿಮ್ಮ ಹಾಡಿಗಾಗಿಯೇ ಒಂದು ಕಂಟ್ರೋಲ್ ಪ್ಯಾನೆಲ್ ಇದ್ದಂತೆ, ಹೆಚ್ಚಿನ ನಿಯಂತ್ರಣ ನಿಮ್ಮ ಬೆರಳ ತುದಿಯಲ್ಲೇ ಇರುತ್ತದೆ. ಹಾಡನ್ನೂ ಹೆಚ್ಚುವರಿ ವೈಶಿಷ್ಟ್ಯಗಳನ್ನೂ ಆನಂದಿಸಿ!
ಸಂಗೀತವನ್ನು ನಿಲ್ಲಿಸುವುದು ಅಥವಾ ವಿರಾಮಗೊಳಿಸುವುದು ಹೇಗೆ?
AT Player ನಲ್ಲಿ ಸಂಗೀತವನ್ನು ವಿರಾಮಗೊಳಿಸುವುದು ಅಥವಾ ನಿಲ್ಲಿಸುವುದು ತುಂಬಾ ಸುಲಭ. ಪರದೆಯ ಕೆಳಭಾಗದಲ್ಲಿ ಅಥವಾ ಟ್ರ್ಯಾಕ್ನ ವಿಸ್ತೃತ ಮೋಡ್ನಲ್ಲಿರುವ ಪ್ಲೇ/ವಿರಾಮ ಬಟನ್ ಬಳಸಿ.
ಜೊತೆಗೆ, ನಿಮ್ಮ ಸಾಧನದ ಅಧಿಸೂಚನೆ ಪ್ರದೇಶದಿಂದಲೂ ಸಂಗೀತವನ್ನು ವಿರಾಮಗೊಳಿಸಬಹುದು. ಕೆಳಗೆ ಸ್ವೈಪ್ ಮಾಡಿ AT Player ಅಧಿಸೂಚನೆಯನ್ನು ತೆರೆಯಿರಿ ಮತ್ತು ಅಲ್ಲಿರುವ ವಿರಾಮ ಬಟನ್ ಒತ್ತಿ.
ಆ್ಯಪ್ ತೆರೆಯುವ ಅಗತ್ಯವೇ ಇಲ್ಲದೆ ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಇದು ತ್ವರಿತ ಮತ್ತು ಅನುಕೂಲಕರ ಮಾರ್ಗ.
ಮುಂದಿನ ಹಾಡನ್ನು ಪ್ಲೇ ಮಾಡುವುದು ಹೇಗೆ?
AT Player ನಲ್ಲಿ ಮುಂದಿನ ಹಾಡಿಗೆ ಹೋಗುವುದು ಸುಲಭವೂ ಹೌದು, ಹಲವು ರೀತಿಯಲ್ಲಿ ಸಾಧ್ಯವೂ ಹೌದು. ಈಗಿನ ಹಾಡು ಮುಗಿದ ತಕ್ಷಣ ತಾನಾಗಿಯೇ ಮುಂದಿನ ಹಾಡು ಶುರುವಾಗುತ್ತದೆ.
ತಕ್ಷಣ ಸ್ಕಿಪ್ ಮಾಡಲು, ಆ್ಯಪ್ನಲ್ಲಿ ಅಥವಾ ನಿಮ್ಮ ಸಾಧನದ ಅಧಿಸೂಚನೆ ಬಾರ್ನಲ್ಲಿರುವ ‘ಮುಂದಿನದು’ ಬಟನ್ ಬಳಸಿ.
ಅಲ್ಲದೆ, ವಿಸ್ತೃತ ಮೋಡ್ನಲ್ಲಿ ಹಾಡಿನ ಕವರ್ ಮೇಲೆ ಸ್ವೈಪ್ ಮಾಡಿದರೂ ಮುಂದಿನ ಟ್ರ್ಯಾಕ್ಗೆ ಹೋಗುತ್ತದೆ. ಈ ಆಯ್ಕೆಗಳು ನಿಮ್ಮ ಸಂಗೀತದಲ್ಲಿ ಸರಾಗವಾಗಿ ಮತ್ತು ಸುಲಭವಾಗಿ ಸಾಗಲು ನೆರವಾಗುತ್ತವೆ.
ಅಷ್ಟೇ ಅಲ್ಲ, ಈ ಆ್ಯಪ್ನಲ್ಲಿ ಅನಿಯಮಿತ ಸ್ಕಿಪ್ಗಳ ಅನುಕೂಲವೂ ಇದೆ, ಇತರ ಸಂಗೀತ ಆ್ಯಪ್ಗಳಲ್ಲಿ ಈ ವೈಶಿಷ್ಟ್ಯ ಯಾವಾಗಲೂ ಸಿಗುವುದಿಲ್ಲ.
ಹುಡುಕಾಟ ಫಲಿತಾಂಶಗಳಿಂದ ಮುಂದಿನ ಹಾಡನ್ನು ಪ್ಲೇ ಮಾಡುವುದು ಹೇಗೆ?
AT Player ನಲ್ಲಿ ನಿಮ್ಮ ಹುಡುಕಾಟ ಫಲಿತಾಂಶಗಳಿಂದ ಮುಂದಿನ ಹಾಡನ್ನು ಪ್ಲೇ ಮಾಡಲು ಒಂದೆರಡು ಸುಲಭ ಮತ್ತು ಮೋಜಿನ ಆಯ್ಕೆಗಳಿವೆ.
ಸಂಗೀತ ಅಡೆತಡೆಯಿಲ್ಲದೆ ಹರಿಯಬೇಕೆಂದರೆ, ಈ ಹುಡುಕಾಟ ಫಲಿತಾಂಶಗಳಿಂದ ನಿಮ್ಮದೇ ಪ್ಲೇಪಟ್ಟಿಯನ್ನು ರಚಿಸಿ.
ಇದರಿಂದ ತಡೆರಹಿತ ಸಂಗೀತ ಪಯಣ ಸಿದ್ಧವಾಗುತ್ತದೆ. ಆದರೆ ಎಲ್ಲವನ್ನೂ ನೀವೇ ನಿಯಂತ್ರಿಸಲು ಬಯಸಿದರೆ, ಹುಡುಕಾಟ ಫಲಿತಾಂಶಗಳಿಂದ ಒಂದೊಂದೇ ಹಾಡನ್ನು ನೀವೇ ಆಯ್ಕೆಮಾಡುತ್ತಾ ಸಾಗಿ.
ಇದು ನೀವೇ ನಿಮ್ಮ ಡಿಜೆ ಆದಂತೆ - ನಿಮ್ಮ ಮೂಡ್ಗೆ ಸರಿಯಾಗಿ ಹೊಂದುವ ಮುಂದಿನ ಟ್ರ್ಯಾಕ್ ಅನ್ನು ನೀವೇ ಆರಿಸುತ್ತೀರಿ!
ಟ್ರ್ಯಾಕ್ಗಳ ನಡುವೆ ಸ್ವಯಂಚಾಲಿತವಾಗಿ ಬದಲಾಯಿಸುವುದು ಹೇಗೆ?
AT Player ನಲ್ಲಿ ಒಂದು ಟ್ರ್ಯಾಕ್ನಿಂದ ಇನ್ನೊಂದಕ್ಕೆ ಸರಾಗವಾಗಿ ಸಾಗಲು, ಒಂದು ಪ್ರಕಾರ ಅಥವಾ ಸಿದ್ಧ ಪ್ಲೇಪಟ್ಟಿಯನ್ನು ಆಯ್ಕೆಮಾಡಿ, ಇಲ್ಲವೇ ನಿಮ್ಮದೇ ಪ್ಲೇಪಟ್ಟಿಯನ್ನು ರಚಿಸಿ.
ಟ್ರ್ಯಾಕ್ಗಳು ಒಂದರ ನಂತರ ಒಂದರಂತೆ ತಾನಾಗಿಯೇ ಪ್ಲೇ ಆಗುತ್ತವೆ, ಹೀಗಾಗಿ ಸಂಗೀತ ನಿರಂತರವಾಗಿ ಹರಿಯುತ್ತದೆ. ಅದೇ ಲಯವನ್ನು ಮತ್ತೆ ಮತ್ತೆ ಆನಂದಿಸಲು, ಒಂದೇ ಟ್ರ್ಯಾಕ್ ಅಥವಾ ಇಡೀ ಪ್ಲೇಪಟ್ಟಿಯನ್ನು ಪುನರಾವರ್ತನೆಗೆ ಹೊಂದಿಸಬಹುದು.
ಸ್ವಲ್ಪ ಅನಿರೀಕ್ಷಿತತೆ ಬೇಕೇ? ಶಫಲ್ ಮೋಡ್ ಆನ್ ಮಾಡಿ, ಹಾಡುಗಳ ಕ್ರಮವನ್ನು ಬೆರೆಸಿ ವೈವಿಧ್ಯಮಯ ಸಂಗೀತವನ್ನು ಆನಂದಿಸಿ, ನಿಮ್ಮ ಆಲಿಸುವ ಅನುಭವ ಯಾವಾಗಲೂ ಹೊಸದಾಗಿ ಮತ್ತು ಊಹೆಗೂ ಮೀರಿದಂತಿರಲಿ.
ಪ್ಲೇಬ್ಯಾಕ್ ವೇಗವನ್ನು ಹೊಂದಿಸುವುದು ಹೇಗೆ?
AT Player ನಲ್ಲಿ ಪ್ಲೇಬ್ಯಾಕ್ ವೇಗದೊಂದಿಗೆ ಆಟವಾಡುವುದು ನಿಮ್ಮ ಸಂಗೀತಕ್ಕೆ ಹೊಸ ಲಯವನ್ನು ಸೇರಿಸಿದಂತೆ.
ನಿಮ್ಮ ಈಗಿನ ಟ್ರ್ಯಾಕ್ ಪ್ಲೇ ಆಗುತ್ತಿರುವಾಗ, ಎಲ್ಲಾ ಜಾದೂ ನಡೆಯುವ ವಿಸ್ತೃತ ಮೋಡ್ಗೆ ಹೋಗಿ.
ಮೇಲ್ಭಾಗದಲ್ಲಿ, ಪೂರ್ಣ ಪರದೆ ಐಕಾನ್ ಬಳಿ ಸ್ಪೀಡೋಮೀಟರ್ನಂತೆ ಕಾಣುವ ಪುಟ್ಟ ಚಿಹ್ನೆಯನ್ನು ಹುಡುಕಿ.
ಅದನ್ನು ಟ್ಯಾಪ್ ಮಾಡಿ ನಿಮಗೆ ಬೇಕಾದ ಗತಿಯನ್ನು ಆಯ್ಕೆಮಾಡಿ - ಶಾಂತ ಕ್ಷಣಗಳಿಗೆ ನಿಧಾನ, ಉತ್ಸಾಹದ ಮೂಡ್ನಲ್ಲಿದ್ದಾಗ ವೇಗ.
ನೀವು ಸಂಗೀತವನ್ನು ಅನುಭವಿಸುವ ರೀತಿಗೆ ನಿಮ್ಮದೇ ಸ್ಪರ್ಶ ನೀಡಲು ಇದು ಸರಳ ಮತ್ತು ಮೋಜಿನ ಮಾರ್ಗ.
ಶಫಲ್ ಮೋಡ್ ಅನ್ನು ನಾನು ಹೇಗೆ ಆನ್ ಮಾಡುವುದು?
ಟ್ರ್ಯಾಕ್ಗಳನ್ನು ಶಫಲ್ ಮಾಡುವುದು ನಿಮ್ಮ ಸಂಗೀತ ಅನುಭವಕ್ಕೆ ಅಚ್ಚರಿಯ ಸ್ಪರ್ಶ ನೀಡುತ್ತದೆ.
ನಿಮ್ಮ ಟ್ರ್ಯಾಕ್ ಪ್ಲೇ ಆಗುತ್ತಿರುವಾಗ, ಹೆಚ್ಚಿನ ನಿಯಂತ್ರಣಗಳಿಗಾಗಿ ವಿಸ್ತೃತ ಮೋಡ್ಗೆ ಹೋಗಿ. ಕೆಳಗೆ ಎಡಭಾಗದಲ್ಲಿ, ಪ್ರೋಗ್ರೆಸ್ ಬಾರ್ ಬಳಿ ನೋಡಿದರೆ, ನಿಮ್ಮ ಟ್ಯಾಪ್ಗಾಗಿ ಕಾತುರದಿಂದ ಕಾಯುತ್ತಿರುವ ಶಫಲ್ ಬಟನ್ ಕಾಣಿಸುತ್ತದೆ.
ಇದನ್ನು ಆನ್ ಮಾಡಿದ ನಂತರ, ನಿಮ್ಮ ಪ್ಲೇಪಟ್ಟಿ ಅಥವಾ ಪ್ರಸ್ತುತ ಆಯ್ಕೆಯಲ್ಲಿರುವ ಟ್ರ್ಯಾಕ್ಗಳ ಕ್ರಮವನ್ನು ಇದು ಬೆರೆಸುತ್ತದೆ ಮತ್ತು ನಿಮಗೆ ಸಂತಸದಾಯಕ, ವೈವಿಧ್ಯಮಯ ಸಂಗೀತ ಪಯಣವನ್ನು ನೀಡುತ್ತದೆ.
ನಿಮ್ಮ ಹಾಡುಗಳು ಅನಿರೀಕ್ಷಿತ ತಿರುವುಗಳನ್ನು ಪಡೆಯುವ ಸ್ವಾರಸ್ಯವನ್ನು ಆನಂದಿಸಿ!
‘ಮೆಚ್ಚಿನವುಗಳ ಜೊತೆ ಶಫಲ್’ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
ಆ್ಯಪ್ನಲ್ಲಿರುವ ‘ಮೆಚ್ಚಿನವುಗಳ ಜೊತೆ ಶಫಲ್’ ವೈಶಿಷ್ಟ್ಯವು ನಿಮ್ಮ ಮೆಚ್ಚಿನ ಟ್ರ್ಯಾಕ್ಗಳನ್ನು ನಿಮ್ಮ ಪ್ಲೇಪಟ್ಟಿಗಳಲ್ಲಿ ಬೆರೆಸುವ ಸೃಜನಶೀಲ ಮಾರ್ಗವಾಗಿದೆ.
ನೀವು ಶಫಲ್ ಮಾಡುತ್ತಿರುವ ಯಾವುದೇ ಪ್ಲೇಪಟ್ಟಿಯಲ್ಲಿ, ನೀವು ಹೊಂದಿಸಿದ ಅಂತರಗಳಲ್ಲಿ, ನಿಮ್ಮ ಮೆಚ್ಚಿನವು ಪಟ್ಟಿಯಿಂದ ಹಾಡುಗಳನ್ನು ಯಾದೃಚ್ಛಿಕವಾಗಿ ಸೇರಿಸುವ ಮೂಲಕ ಇದು ಕೆಲಸ ಮಾಡುತ್ತದೆ.
ಇದನ್ನು ಬಳಸಲು, ಮೊದಲು ಹಾಡುಗಳನ್ನು ನಿಮ್ಮ ಮೆಚ್ಚಿನವು ಪಟ್ಟಿಗೆ ಸೇರಿಸಿ, ನಂತರ ಎಲ್ಲ ಸೆಟ್ಟಿಂಗ್ಗಳು ವಿಭಾಗದಲ್ಲಿ (ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಐಕಾನ್ ಟ್ಯಾಪ್ ಮಾಡಿ) ಮೆಚ್ಚಿನವುಗಳ ಜೊತೆ ಶಫಲ್ ಆನ್ ಮಾಡಿ ಮತ್ತು ಎಷ್ಟು ಅಂತರದಲ್ಲಿ ಒಮ್ಮೆ ಮೆಚ್ಚಿನ ಹಾಡು ಬರಬೇಕು ಎಂಬುದನ್ನು ಆಯ್ಕೆಮಾಡಿ.
ಇದು ನಿಮ್ಮ ಆಲಿಸುವಿಕೆಗೆ ವೈಯಕ್ತಿಕ ಸ್ಪರ್ಶ ನೀಡುತ್ತದೆ ಮತ್ತು ಹೊಸ ಅನ್ವೇಷಣೆಗಳ ಜೊತೆಗೆ ನಿಮ್ಮ ಅಚ್ಚುಮೆಚ್ಚಿನ ಹಾಡುಗಳೂ ಪ್ಲೇ ಆಗುವಂತೆ ನೋಡಿಕೊಳ್ಳುತ್ತದೆ.
ನಿಮ್ಮ ಮೆಚ್ಚಿನವು ಪಟ್ಟಿಯಲ್ಲಿ ಒಂದೇ ಹಾಡು ಇದ್ದರೆ, ಅದು ಪ್ರತಿ ಅಂತರದಲ್ಲೂ ಪುನರಾವರ್ತನೆಯಾಗುತ್ತದೆ ಮತ್ತು ನಿಮ್ಮ ಪ್ಲೇಪಟ್ಟಿಯ ಲಯಕ್ಕೆ ಪರಿಚಿತ ತಾಳವನ್ನು ಸೇರಿಸುತ್ತದೆ.
ಹಾಡು ಅಥವಾ ಪ್ಲೇಪಟ್ಟಿಯನ್ನು ಪುನರಾವರ್ತಿಸುವುದು ಹೇಗೆ?
ಆ್ಯಪ್ನಲ್ಲಿ ಹಾಡು ಅಥವಾ ಪ್ಲೇಪಟ್ಟಿಯನ್ನು ಪುನರಾವರ್ತನೆಗೆ ಹೊಂದಿಸುವುದು, ನಿಮಗಾಗಿಯೇ ಒನ್ಸ್ ಮೋರ್ ಹಾಡಿಸಿಕೊಂಡಂತೆ.
ಪ್ಲೇ ಆಗುತ್ತಿರುವ ಯಾವುದೇ ಟ್ರ್ಯಾಕ್ನ ವಿಸ್ತೃತ ಮೋಡ್ನಲ್ಲಿ, ಪುನರಾವರ್ತಿಸಿ ಬಟನ್ಗಾಗಿ ಕೆಳಗಿನ ಬಲ ಮೂಲೆಯತ್ತ ಒಮ್ಮೆ ಕಣ್ಣು ಹಾಯಿಸಿ.
ಒಂದೇ ಟ್ರ್ಯಾಕ್ ಅಥವಾ ಇಡೀ ಪ್ಲೇಪಟ್ಟಿ ಮತ್ತೆ ಮತ್ತೆ ಲೂಪ್ನಲ್ಲಿ ಪ್ಲೇ ಆಗುತ್ತಲೇ ಇರುವಂತೆ ಮಾಡುವ ನಿಮ್ಮ ಪುಟ್ಟ ಮಾಯಾದಂಡ ಇದು.
ಆ ಒಂದು ಟ್ರ್ಯಾಕ್ ಅನ್ನೇ ಮತ್ತೆ ಮತ್ತೆ ಕೇಳುವ ಮೂಡ್ನಲ್ಲಿರಲಿ ಅಥವಾ ಇಡೀ ಪ್ಲೇಪಟ್ಟಿಯೇ ಆ ದಿನದ ನಿಮ್ಮ ಸೌಂಡ್ಟ್ರ್ಯಾಕ್ ಆಗಬೇಕೆಂದಿರಲಿ, ಈ ವೈಶಿಷ್ಟ್ಯ ನಿಮಗಾಗಿ ಸಿದ್ಧವಾಗಿದೆ.
ಇಡೀ ಪ್ಲೇಪಟ್ಟಿಯನ್ನು ಪುನರಾವರ್ತಿಸುವುದು ಹೇಗೆ?
ಪ್ಲೇಪಟ್ಟಿಯನ್ನು ಅಂತ್ಯವಿಲ್ಲದ ಲೂಪ್ ಆಗಿ ಬದಲಾಯಿಸುವುದು, ಎಂದಿಗೂ ಖಾಲಿಯಾಗದ ನಿಮ್ಮ ಮೆಚ್ಚಿನ ಖಾದ್ಯ ಇದ್ದಂತೆ. ಮೊದಲು, ಪರದೆಯ ಕೆಳಭಾಗದಲ್ಲಿ ಈಗ ಪ್ಲೇ ಆಗುತ್ತಿರುವ ಟ್ರ್ಯಾಕ್ ಮೇಲೆ ಕ್ಲಿಕ್ ಮಾಡಿ ಅದರ ವಿಸ್ತೃತ ವೀಕ್ಷಣೆಯನ್ನು ತೆರೆಯಿರಿ.
ಈ ವಿಶೇಷ ಮೋಡ್ನಲ್ಲಿ, ಕೆಳಗಿನ ಬಲ ಮೂಲೆಯಲ್ಲಿ “ಪುನರಾವರ್ತಿಸಿ” ಬಟನ್ ಅಡಗಿಸಿಟ್ಟ ನಿಧಿಯಂತೆ ನಿಮಗಾಗಿ ಕಾಯುತ್ತಿದೆ.
ಅದನ್ನು ಟ್ಯಾಪ್ ಮಾಡಿ ಮತ್ತು ಇಡೀ ಪ್ಲೇಪಟ್ಟಿಯನ್ನು ಪುನರಾವರ್ತಿಸುವ ಆಯ್ಕೆಯನ್ನು ಆರಿಸಿ. ಇದು ನಿಮ್ಮ ಪ್ಲೇಪಟ್ಟಿಯನ್ನು ಖುಷಿಯ ಗಿರಿಗಿಟ್ಲೆಯಲ್ಲಿ ಕೂರಿಸಿದಂತೆ, ನೀವು ಆರಿಸಿದ ಹಾಡುಗಳು ಸುತ್ತಿ ಸುತ್ತಿ ಪ್ಲೇ ಆಗುತ್ತಲೇ ಇರುತ್ತವೆ.
ಹಾಡಿನ ನಿರ್ದಿಷ್ಟ ಭಾಗವನ್ನು ಲೂಪ್ ಮಾಡುವುದು ಹೇಗೆ?
ಪ್ಲೇಯರ್ ವೀಕ್ಷಣೆಯ ಸೆಟ್ಟಿಂಗ್ಗಳಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೆನು ಟ್ಯಾಪ್ ಮಾಡಿ “A/B ಪುನರಾವರ್ತನೆ” ವೈಶಿಷ್ಟ್ಯವನ್ನು ತೆರೆಯಿರಿ. ಇದರಿಂದ ಹಾಡಿನ ನಿಮ್ಮ ಮೆಚ್ಚಿನ ಭಾಗಗಳನ್ನು ಲೂಪ್ ಮಾಡಬಹುದು. ಆನಂದಿಸಿ!
ಹಾಡಿನ ಅವಧಿಯನ್ನು ಎಲ್ಲಿ ತೋರಿಸಲಾಗುತ್ತದೆ?
ಟ್ರ್ಯಾಕ್ ಮೇಲೆ ಟ್ಯಾಪ್ ಮಾಡಿದರೆ ಸಾಕು. ಹಾಡಿನ ಅವಧಿಯನ್ನು ಟ್ರ್ಯಾಕ್ನ ವಿವರಗಳಲ್ಲಿ ತೋರಿಸಲಾಗುತ್ತದೆ.
ಪ್ಲೇಬ್ಯಾಕ್ ಗುಣಮಟ್ಟವನ್ನು ಬದಲಾಯಿಸುವುದು ಹೇಗೆ?
ಆ್ಯಪ್ನಲ್ಲಿ ವೀಡಿಯೊ ಗುಣಮಟ್ಟವನ್ನು ಹೊಂದಿಸುವುದು ಎಂದರೆ ನಿಮ್ಮ ಮೆಚ್ಚಿನ ಕ್ಲಿಪ್ಗಳನ್ನು ನೋಡಲು ಸರಿಯಾದ ಕನ್ನಡಕವನ್ನು ಆರಿಸಿಕೊಂಡಂತೆ.
ವಿಸ್ತೃತ ಮೋಡ್ನಲ್ಲಿ ವೀಡಿಯೊ ಸೆಟ್ಟಿಂಗ್ಗಳನ್ನು ಟ್ಯಾಪ್ ಮಾಡಿ, ನಿಮಗೆ ಸೂಕ್ತವಾದ ರೆಸಲ್ಯೂಶನ್ ಆರಿಸಿ. ನಿಮಗೆ ಸ್ಪಷ್ಟ ಮತ್ತು ತೀಕ್ಷ್ಣ ವೀಡಿಯೊಗಳೇ ಬೇಕಾದರೆ ಹೆಚ್ಚಿನ ರೆಸಲ್ಯೂಶನ್ ಆರಿಸಿ, ಆದರೆ ಅದು ಸ್ವಲ್ಪ ಹೆಚ್ಚು ಡೇಟಾ ಬಳಸುತ್ತದೆ.
ಡೇಟಾ ಉಳಿಸಲು ಕಡಿಮೆ ಗುಣಮಟ್ಟ ಅಥವಾ ಅತಿ ಚಿಕ್ಕ ಪಾಪ್ಅಪ್ ಗಾತ್ರವನ್ನು ಆರಿಸಿ. ನೀವು ಪೂರ್ಣ ಪರದೆಗೆ ಹೋದಾಗ ಆ್ಯಪ್ ತಾನಾಗಿಯೇ ಹೆಚ್ಚಿನ ಗುಣಮಟ್ಟದ ಮೋಡ್ಗೆ ಬದಲಾಗುತ್ತದೆ. ಆ್ಯಪ್ ಗುಣಮಟ್ಟ ಮತ್ತು ಸ್ಕ್ರೀನ್ ಗಾತ್ರವನ್ನು ಜಾಣ್ಮೆಯಿಂದ ಸಮತೋಲನಗೊಳಿಸುತ್ತದೆ, ಹೀಗಾಗಿ ನಿಮಗೆ ಪ್ರತಿ ಬಾರಿಯೂ ಅತ್ಯುತ್ತಮ ವೀಕ್ಷಣೆ ಸಿಗುತ್ತದೆ.
ಈಕ್ವಲೈಜರ್ (EQ) ವಿವರಗಳು
AT Player ನಲ್ಲಿರುವ ಈಕ್ವಲೈಜರ್ ನಿಜವಾದ 10-ಬ್ಯಾಂಡ್ ಸ್ಟುಡಿಯೋ ಈಕ್ವಲೈಜರ್ ಆಗಿದೆ - 31 Hz ನಿಂದ 16 kHz ವರೆಗಿನ ಹತ್ತು ಸ್ಲೈಡರ್ಗಳು, ಸಿದ್ಧ ಪ್ರೀಸೆಟ್ಗಳು, ಕಸ್ಟಮ್ ಬ್ಯಾಂಡ್ ಸೆಟ್ಟಿಂಗ್ಗಳು ಮತ್ತು ಪ್ರತ್ಯೇಕ ಬಾಸ್ ಹಾಗೂ ಟ್ರೆಬಲ್ ಬೂಸ್ಟ್ ಇದರಲ್ಲಿವೆ, ಹೀಗಾಗಿ ನಿಮ್ಮ ಇಷ್ಟಕ್ಕೆ ತಕ್ಕಂತೆ ಧ್ವನಿಯನ್ನು ಇನ್ನಷ್ಟು ಆಳವಾಗಿ, ಚುರುಕಾಗಿ ಅಥವಾ ಜೋರಾಗಿ ಮಾಡಬಹುದು. ಹೋಲಿಕೆಗೆ ಹೇಳುವುದಾದರೆ, Spotify 6-ಬ್ಯಾಂಡ್ ಈಕ್ವಲೈಜರ್ ಅನ್ನು iPhone ನಲ್ಲಿ ಮಾತ್ರ ನೀಡುತ್ತದೆ, Android ನಲ್ಲಿ ಯಾವುದೂ ಇಲ್ಲ, ಮತ್ತು YouTube Music ಗೆ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ತನ್ನದೇ ಆದ ಈಕ್ವಲೈಜರ್ ಇಲ್ಲ - ನಿಮ್ಮ ಡೌನ್ಲೋಡ್ಗಳು, ಆಮದು ಮಾಡಿದ ಫೈಲ್ಗಳು ಮತ್ತು ರೇಡಿಯೋ ಜೊತೆಗೆ, ದೊಡ್ಡ ಸೇವೆಗಳಲ್ಲಿ ಇಲ್ಲವೇ ಇಲ್ಲದ ಧ್ವನಿ ಸಾಧನ ನಿಮಗೆ ಸಿಗುತ್ತದೆ. ಇದು ಮೆನುವಿನಲ್ಲಿದೆ - ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಐಕಾನ್ ಟ್ಯಾಪ್ ಮಾಡಿ, ಸೆಟ್ಟಿಂಗ್ಗಳು ವಿಭಾಗದಲ್ಲಿ ಈಕ್ವಲೈಜರ್ ಆರಿಸಿ. Android 8 ಅಥವಾ ಅದಕ್ಕಿಂತ ಹಳೆಯ ಆವೃತ್ತಿಯ ಫೋನ್ಗಳಲ್ಲಿ ಆ್ಯಪ್ ಬದಲಿಗೆ ಸಿಸ್ಟಂನ 5-ಬ್ಯಾಂಡ್ ಈಕ್ವಲೈಜರ್ ಬಳಸುತ್ತದೆ.
ನಾನು ಸಿಸ್ಟಂ EQ ಬಳಸಬಹುದೇ?
ಖಂಡಿತ! ನಿಮ್ಮ ಫೋನ್ನ ಸಿಸ್ಟಂ EQ ಅನ್ನು ಆ್ಯಪ್ನಲ್ಲಿನ ಆನ್ಲೈನ್ ಹಾಡುಗಳಿಗಾಗಿ ನಿಮ್ಮದೇ ವೈಯಕ್ತಿಕ ಆಡಿಯೊ ಮಿಕ್ಸರ್ ಎಂದು ಭಾವಿಸಿ.
ಆ್ಯಪ್ನ ಈಕ್ವಲೈಜರ್ ನಿಮ್ಮ ಆಫ್ಲೈನ್ ಮತ್ತು ರೇಡಿಯೋ ಆಲಿಸುವಿಕೆಗೆ ರಂಗು ತುಂಬುತ್ತದೆ, ಆದರೆ YouTube ನಿಯಮಗಳ ಕಾರಣದಿಂದ ಅದು ಸದ್ಯಕ್ಕೆ ಆನ್ಲೈನ್ ಸಂಗೀತದ ಮೇಲೆ ಕೆಲಸ ಮಾಡುವುದಿಲ್ಲ.
ಮುಂದೊಂದು ದಿನ EQ ಅನ್ನು ಆನ್ಲೈನ್ ಸ್ಟ್ರೀಮ್ಗಳಿಗೂ ತರಬಹುದು ಎಂಬ ಆಶಯದೊಂದಿಗೆ ನಾವು ಈ ನೀತಿಗಳ ಮೇಲೆ ಗಮನ ಇಟ್ಟಿದ್ದೇವೆ. ಸದ್ಯಕ್ಕೆ ನಿಮ್ಮ ಫೋನ್ನ ಸಿಸ್ಟಂ EQ ನೆರವಿಗೆ ಬರುತ್ತದೆ, ಆನ್ಲೈನ್ ಸಂಗೀತವನ್ನು ನಿಮ್ಮ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊಂದಿಸಲು ಮತ್ತು ಸೂಕ್ಷ್ಮವಾಗಿ ತಿದ್ದಲು ಅನುವು ಮಾಡಿಕೊಡುತ್ತದೆ.
ಇದು ನಿಮ್ಮ ಜೇಬಿನಲ್ಲೇ ಪುಟ್ಟ ಸೌಂಡ್ ಸ್ಟುಡಿಯೋ ಇದ್ದಂತೆ!
ಸಾಹಿತ್ಯ
AT Player ನ ಸಾಹಿತ್ಯ ವೈಶಿಷ್ಟ್ಯ ನಿಮ್ಮ ಸಂಗೀತ ಆಲಿಸುವಿಕೆಗೆ ಮೋಜಿನ ಹೊಸ ತಿರುವು ನೀಡುತ್ತದೆ. ನೀವು ಆನ್ಲೈನ್ನಲ್ಲಿರಲಿ ಅಥವಾ ಆಫ್ಲೈನ್ನಲ್ಲಿರಲಿ, ಯಾವುದೇ ಹಾಡಿನ ಸಾಹಿತ್ಯವನ್ನು ತೆರೆಯಲು ಇದು ಅನುವು ಮಾಡಿಕೊಡುತ್ತದೆ.
ಸಾಹಿತ್ಯವು ಸಂಗೀತದ ಜೊತೆಜೊತೆಗೇ ನಿಮ್ಮ ಸ್ಕ್ರೀನ್ನಲ್ಲಿ ಸ್ಕ್ರೋಲ್ ಆಗುತ್ತದೆ. ಪದಗಳನ್ನು ಬದಲಿಸಬೇಕೆನಿಸುತ್ತಿದೆಯೇ? ಹಿಂಜರಿಯದೆ ಎಡಿಟ್ ಮಾಡಿ. ಸಾಹಿತ್ಯವನ್ನು ರೆಕಾರ್ಡ್ ಮಾಡುವ ಅಥವಾ ನಿಮ್ಮ ಹಾಡು ಅಥವಾ ಗುಂಪಿನ ಪ್ಲೇಗಳ ಲೆಕ್ಕ ಇಡುವ ಅಚ್ಚುಕಟ್ಟಾದ ಆಯ್ಕೆಯೂ ಇದೆ.
ಈ ವೈಶಿಷ್ಟ್ಯ ನಿಮ್ಮ ಸಂಗೀತಕ್ಕೆ ಮೋಜಿನ, ಸಂವಾದಾತ್ಮಕ ಆಯಾಮವನ್ನು ಸೇರಿಸುತ್ತದೆ ಮತ್ತು ಪ್ರತಿಯೊಂದು ಹಾಡನ್ನೂ ನೀವು ಜೊತೆಜೊತೆಗೇ ಅನುಸರಿಸಬಹುದಾದ ಕಥೆಯನ್ನಾಗಿಸುತ್ತದೆ.
ಗೇಮ್ ಧ್ವನಿಗಳು ಮತ್ತು AT Player ಸಂಗೀತದ ನಡುವೆ ಸಮತೋಲನ ಹೊಂದಿಸುವುದು ಹೇಗೆ?
ಗೇಮ್ ಆಡುವಾಗ AT Player ಹಾಡುಗಳನ್ನು ಕೇಳುತ್ತಿದ್ದೀರಾ? ಗೇಮ್ ಧ್ವನಿಗಳು ಗಮನವನ್ನೆಲ್ಲ ಸೆಳೆದುಕೊಳ್ಳದೆ, ನಿಮ್ಮ ಸಂಗೀತದ ಮೂಡ್ ಜೋರಾಗಿಯೇ ಇರುವಂತೆ ಮಾಡಲು ಇಲ್ಲೊಂದು ಮೋಜಿನ ಸಲಹೆ ಇದೆ.
ನಿಮ್ಮ ಗೇಮ್ ಅಥವಾ ಸಾಧನದ ಆಡಿಯೊ ಸೆಟ್ಟಿಂಗ್ಗಳೊಂದಿಗೆ ಪ್ರಯೋಗ ಮಾಡಿ ನೋಡಿ. ಇದು ಡಿಜೆ ಆಗಿ, ಗೇಮ್ ಧ್ವನಿಗಳನ್ನು ಹಿನ್ನೆಲೆಯಲ್ಲಿ ಪ್ಲೇ ಆಗುವ ನಿಮ್ಮ ಮೆಚ್ಚಿನ ಟ್ರ್ಯಾಕ್ಗಳೊಂದಿಗೆ ಸಮತೋಲನಗೊಳಿಸಿದಂತೆ.
ಅಥವಾ ನಿಮಗೆ ಸಂಗೀತವೇ ಮುಖ್ಯವಾದರೆ, ಗೇಮ್ ಧ್ವನಿಗಳನ್ನು ಆಫ್ ಮಾಡಿಬಿಡಬಾರದೇಕೆ? ಆಗ ಇರುವುದು ನೀವು, ಗೇಮ್ ಮತ್ತು ಮೂಡ್ ಹೊಂದಿಸುವ ನೀವೇ ಆರಿಸಿದ ಸೌಂಡ್ಟ್ರ್ಯಾಕ್ ಮಾತ್ರ.
AT Player ಜೊತೆ ಗೇಮ್ ಆಡಿ, ಸಂಗೀತಕ್ಕೆ ತಲೆದೂಗಿ!